ಇನ್ನೇನು ಚಳಿಗಾಳಿ, ಶೀತ ಕಾಡತೊಡಗುತ್ತದೆ. ಹೀಗಿರುವಾಗ ಬಿಸಿ ಬಿಸಿ ಕಾಫಿ ಕುಡಿಯುವ ಮನಸಾಗುವುದು ಸಹಜ. ಆದರೆ ಕಾಫಿ, ಟೀ ನಮ್ಮ ದೇಹಕ್ಕೆ ಎಷ್ಟು ಆರೋಗ್ಯಕರ ಎನ್ನುವುದು ಪ್ರಶ್ನೆ. ಗೂಗಲ್ ಮಾಡಿದರೆ ನಿಮಗೆ ಕಾಫಿಯ ಸತತ ಸೇವನೆಯಿಂದಾಗುವ ಅಡ್ಡ ಪರಿಣಾಮಗಳ ದೊಡ್ಡ ಲಿಸ್ಟೇ ಸಿಗುವುದು! ಹೀಗಿರುವಾಗ ಚಳಿಯನ್ನೋಡಿಸುವ, ರುಚಿಕರವಾಗಿರುವ ಜೊತೆಗೆ ಆರೋಗ್ಯಕರವೂ ಆಗಿರುವ ಪೇಯವೊಂದರ ಅಗತ್ಯತೆ ಚೆನ್ನಾಗಿ ಅರಿವಾಗುತ್ತದೆ. ನಮ್ಮಲ್ಲಿ ಅಂದರೆ ಶಿರಸಿಯ ಕಡೆ ಯಾರೇ ಬರಲಿ.. "ಒಂದು ಕುಡ್ತೆ ಕಷಾಯ"ವನ್ನಾದರೂ ಕೊಟ್ಟೇ ಕಳಿಸುವುದು ವಾಡಿಕೆ. ಊಟದ ಸಮಯವೇ ಆಗಿರಲಿ, ಇಲ್ಲಾ ಹೊದ್ದು ಮಲಗುವ ಸಮಯವೇ ಆಗಿರಲಿ... ಕಷಾಯ ನಮ್ಮ ಹಸಿವನ್ನು ತಣಿಸದು, ನಿದ್ದೆಯನ್ನು ಆರಿಸದು. ಬದಲಿಗೆ ಜೀರ್ಣಶಕ್ತಿಯನ್ನು ಹೆಚ್ಚಿಸಿ, ಸುಖಕರವಾದ ನಿದ್ದೆಗೆ ಪ್ರೇರೇಪಿಸುವುದು. ಇಂತಹ ಕಷಾಯವನ್ನು ತಯಾರಿಸಲು ನಿಮಗೆ ತಗಲುವ ಸಮಯ ಕೇವಲ ೨-೩ ನಿಮಿಷ! ಆದರೆ ಮೊದಲು ಕಷಾಯದ ಹುಡಿಯನ್ನು ಮಾಡಿಟ್ಟುಕೊಳ್ಳಬೇಕಾದ್ದು ಅತ್ಯಗತ್ಯ. ಇದನ್ನು ತಯಾರಿಸಲು ತಗಲುವುದು ಕೇವಲ ೧೫ ನಿಮಿಷ. ಹೀಗೆ ತಯಾರಿಸಿಟ್ಟುಕೊಂಡ ಹುಡಿಯನ್ನು ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟರೆ ತಿಂಗಳುಗಟ್ಟಲೆ ಬರುವುದು. ಈ ಪುಡಿಯನ್ನು ಉಪಯೋಗಿಸಿಯೇ ಕಷಾಯದ ಪೇಯವನ್ನು ತಯಾರಿಸುವುದು.
ಮೊದಲಿಗೆ ಕಷಾಯದ ಹುಡಿಯನ್ನು ಮಾಡುವ ವಿಧಾನ
ಬೇಕಾಗುವ ಸಾಮಗ್ರಿಗಳು :
೧. ಕೊತ್ತುಂಬರಿ ಬೀಜ - ೧/೨ ಲೋಟ
೨. ಜೀರಿಗೆ - ೧ ಲೋಟ
೩. ದಾಲ್ಚೀನಿ ಚಕ್ಕೆ - ಹೆಬ್ಬೆರಳಿನ ಗಾತ್ರದಷ್ಟು
೪. ಲವಂಗ - ೫-೬
೫. ಏಲಕ್ಕಿ - ೫-೬ (ಸಿಪ್ಪೆ ಸಹಿತ)
೬. ಕರಿ ಮೆಣಸಿನ ಕಾಳು - ೬
೭. ಬಡೇ ಸೊಪ್ಪು (ಸೋಂಪು) - ಒಂದು ಮುಷ್ಟಿ.
(ಮೇಲೆ ಹೇಳಿರುವ ಲೋಟ, ಹೋಟೇಲಿನಲ್ಲಿ ಕಾಫಿ ಕುಡಿಯಲು ಕೊಡುವಷ್ಟು ಸಣ್ಣ ಲೋಟವೂ ಅಲ್ಲ, ಹಳ್ಳಿಯಲ್ಲಿ ಆತಿಥ್ಯಮಾಡುವಾಗ ಕೊಡುವಷ್ಟು ದೊಡ್ಡದೂ ಅಲ್ಲ. ಮಧ್ಯಮ ಗಾತ್ರದ್ದು...:))
ಹುಡಿಯನ್ನು ಮಾಡುವ ವಿಧಾನ :
*ಮೊದಲಿಗೆ ಜೀರಿಗೆ + ಲವಂಗ + ಏಲಕ್ಕಿ + ದಾಲ್ಚೀನಿ + ಕರಿ ಮೆಣಸಿನ ಕಾಳುಗಳು ಎಲ್ಲವನ್ನೂ ಒಂದು ಚೆನ್ನಾಗಿ ಒಣಗಿದ ಬಾಣಲೆಗೆ ಹಾಕಿ ಹಾಗೇ ಚೆನ್ನಾಗಿ ಹುರಿಯಬೇಕು. (* ನೆನಪಿಡಿ ಎಣ್ಣೆಯನ್ನು ಹಾಕಿ ಹುರಿಯುವುದಲ್ಲ.) ಸುಮಾರು ಐದು ನಿಮಿಷದೊಳಗೇ ಕೆಂಪಗೆ ಹುರಿದು ಅದರ ಘಮ ಘಮ ಪರಿಮಳ ನಿಮ್ಮನ್ನಡರುವುದು.
*ಹಾಗೆ ಹುರಿದ ಪದಾರ್ಥಗಳನ್ನು, ಒಣಗಿದ ಮಿಕ್ಸಿಯಲ್ಲಿ ಹಾಕಿಡಿ. ತದನಂತರ ಅದೇ ಬಾಣಲೆಗೆ ಕುತ್ತೊಂಬರಿ ಬೀಜವನ್ನು ಹಾಕಿ ಮೊದಲಿನಂತೇ ಚೆನ್ನಾಗಿ ಹುರಿಯಿರಿ. ಕೇವಲ ೨ ನಿಮಿಷದೊಳಗೆ ಕೆಂಪಗೆ ಹುರಿದು ಬರುತ್ತದೆ. ಅದನ್ನೂ ಮಿಕ್ಸಿಯಲ್ಲಿ ಮೊದಲೇ ಹಾಕಿಟ್ಟಿದ್ದ ಮಿಶ್ರಣಕ್ಕೆ ಹಾಕಿಕೊಳ್ಳಿ.
*ನಂತರ ಮತ್ತೆ ಅದೇ ಬಾಣಲೆಯಲ್ಲಿ ಸೋಂಪನ್ನು ಹಾಕಿ ಚೆನ್ನಾಗಿ ಹುರಿಯಿರಿ. ಇದೂ ಸಹ ಕೂಡಲೇ ಒಂದೆರಡು ನಿಮಿಷಗಳೊಳಗೇ ಹುರಿದುಬರುತ್ತದೆ.
*ಕೊನೆಯಲ್ಲಿ ಎಲ್ಲಾ ಮಿಶ್ರಣವನ್ನೂ ಒಟ್ಟಿಗೇ ಸೇರಿಸಿ, ಮಿಕ್ಸಿಯಲ್ಲಿ ನುಣ್ಣಗೆ ಹುಡಿಮಾಡಿ, ಗಾಳಿಯಾಡದ ಡಬ್ಬದಲ್ಲಿ ತುಂಬಿಸಿಟ್ಟರೆ ಘಮ ಘಮಿಸುವ ಕಷಾಯದ ಹುಡಿ ಉಪಯೋಗಕ್ಕೆ ಸಿದ್ಧ.
ಕಷಾಯ ಪೇಯವನ್ನು ಮಾಡುವ ವಿಧಾನ
ಇದು ಬಹಳ ಸುಲಭ. ಒಂದು ಕಪ್ ಅಳತೆಯಲ್ಲಿ ಹೇಳುವುದಾದರೆ ...
ಮೊದಲು ಅರ್ಧ ಲೊಟ ನೀರಿಗೆ ಒಂದು ಚಮಚ ಮೊದಲೇ ಮಾಡಿಟ್ಟಿದ್ದ ಕಷಾಯದ ಹುಡಿಯನ್ನು ಹಾಕಿ ಕುದಿಸಿ. ಕುದಿ ಬರುತ್ತಿದೆ ಎನ್ನುವಾಗಲೇ ಅರ್ಧ ಲೋಟ ಹಾಲು (ಬೇಕಿದ್ದರೆ ಹಾಲು ಹಾಕದೆಯೋ ಇಲ್ಲಾ ಸ್ವಲ್ಪವೇ ಹಾಲನ್ನು ಹಾಕಿಯೋ ಮಾಡಬಹುದು) ಹಾಕಿ ಬಿಸಿ ಮಾಡಿದರೆ ಕಷಾಯ ರೆಡಿ. ಸಿಹಿ ಬೇಕಿದ್ದವರು ಒಂದು ಚಮಚ ಸಕ್ಕರೆ ಹಾಕಿ ಸೇವಿಸಬಹುದು. ಇನ್ನು ಮಕ್ಕಳಿಗೆ ಬರೀ ಹಾಲಿನಲ್ಲೇ ಕಷಾಯವನ್ನು ಮಾಡಿ ಕೊಟ್ಟರೆ ಮತ್ತೂ ಉತ್ತಮ. (ನೀರನ್ನು ತೀರಾ ಕಡಿಮೆ ಹಾಕಿಯೋ ಇಲ್ಲಾ ಹಾಕದೆಯೂ..).
ವಿಶೇಷ ಸೂಚನೆ : - ಬೇಕಿದ್ದಲ್ಲಿ ಕಷಾಯದ ಹುಡಿಯನ್ನು ನೀರಿಗೆ ಹಾಕಿ ಕುದಿಸುವಾಗ ಕಾಲು ಚಮಚ ಜ್ಯೇಷ್ಠ ಮದ್ದಿನ ಹುಡಿ (ಎಲ್ಲಾ ಆಯುರ್ವೇದಿಕ್ ಅಂಗಡಿಗಳಲ್ಲಿ ಲಭ್ಯ)ಹಾಕಿ ಕುದಿಸಿ, ಹಾಲು ಹಾಕಿ ಕುಡಿದರೆ ಮತ್ತೂ ಉತ್ತಮ.
ವಿಶೇಷ ಸೂಚನೆ : - ಬೇಕಿದ್ದಲ್ಲಿ ಕಷಾಯದ ಹುಡಿಯನ್ನು ನೀರಿಗೆ ಹಾಕಿ ಕುದಿಸುವಾಗ ಕಾಲು ಚಮಚ ಜ್ಯೇಷ್ಠ ಮದ್ದಿನ ಹುಡಿ (ಎಲ್ಲಾ ಆಯುರ್ವೇದಿಕ್ ಅಂಗಡಿಗಳಲ್ಲಿ ಲಭ್ಯ)ಹಾಕಿ ಕುದಿಸಿ, ಹಾಲು ಹಾಕಿ ಕುಡಿದರೆ ಮತ್ತೂ ಉತ್ತಮ.
ಈ ಕಷಾಯವನ್ನು ಕುಡಿಯುವುದರಿಂದ ಆಗುವ ಉಪಯೋಗಗಳು ಹಲವು.
೧. ಯಾವುದೇ ರೀತಿಯ ಅಡ್ಡ ಪರಿಣಾಮಗಳುಂಟಾಗದು. ಯಾವ ಹೊತ್ತಿನಲ್ಲೂ ಎಷ್ಟು ಬೇಕಿದ್ದರೂ ಕುಡಿಯಬಹುದು.
೨. ಕಫ, ಗಂಟಲು ನೋವು, ಅಜೀರ್ಣದ ತೊಂದರೆ - ಈ ಎಲ್ಲಾ ಸಮಸ್ಯೆಗಳಿಗೂ ಇದು ಉತ್ತಮ ಪರಿಹಾರವಾಗಿದೆ.
೩. ಪಿತ್ತದ ಸಮಸ್ಯೆ ಇದ್ದವರು ಟೀ, ಕಾಫಿಯನ್ನು ಸೇವಿಸಲೇ ಬಾರದೆನ್ನುತ್ತಾರೆ ವೈದ್ಯರು. ಹಾಗಿರುವಾಗ ಈ ಪೇಯ ಅತ್ಯುತ್ತಮ ಬದಲಿಯಾಗಿದೆ.
೪. ಒಮ್ಮೆ ಈ ಕಷಾಯದ ರುಚಿ ಹತ್ತಿದವರು ಮತ್ತೊಮ್ಮೆ ಯಾವುದೇ ಕೆಫೆಯ ಕಡೆಯೂ ಹೆಜ್ಜೆ ಹಾಕರು.
-ತೇಜಸ್ವಿನಿ ಹೆಗಡೆ.
ತೇಜಕ್ಕ ನಿನ್ನ ಒಗ್ಗರಣೆ ಪರಿಮಳ ಸವಿಯಲು ನಾನಂತು ರೆಡಿ..
ReplyDeletethaq.. teju.. ista aytu oLLe kashayane heLiddeeri
ReplyDeleteAll the bestu Tejakka...:-)
ReplyDeleteಹೊಸ ಹೊಸ ಪೋಸ್ಟ್ ಗೆ ಕಾಯ್ತಾ ಇರ್ತಿ ...ನನ್ನ ಮುಂದಿನ ದಿನಗಳಿಗೆ ಉಪಯೋಗ ಆಗ್ತು ...;-)
ತುಂಬಾ ಉತ್ತಮ ಮಾಹಿತಿ ಮತ್ತು ಸುಲಲಿತ ಬರವಣಿಗೆಗಾಗಿ ಧನ್ಯವಾದಗಳು
ReplyDeleteಜ್ಯೇಷ್ಟಮಧು ಸೇರಿಸಿದರೆ ಚೊಲೊ ಆಗ್ತು ಅಲ್ಲದಾ?
ReplyDelete@ವಾಣಿಶ್ರೀ, ಮನಸು, ದಿವ್ಯ -
ReplyDeleteತುಂಬಾ ಧನ್ಯವಾದಗಳು. ನಿಮ್ಮೆಲ್ಲರ ಪ್ರೋತ್ಸಾಹ ನನ್ನಡುಗೆಗೆ ಅತ್ಯವಶ್ಯಕ :) ಅಂದಹಾಗೆ ದಣಿವಾರಿಸಿಕೊಂಡು ಕಷಾಯ ಸೇವಿಸಿದಿರೆಂದು ಭಾವಿಸುವೆ :)
@ಅಮೃತ,
ಸ್ವಾಗತ. ತುಂಬಾ ಧನ್ಯವಾದ. ಹೌದು... ಇದನ್ನು ಸೇರಿಸ್ಲಕ್ಕು... ಕಷಾಯದ ವಿಶೇಷ ಎಂತು ಅಂದ್ರೆ, ನಾನು ಹೇಳಿದ ಮಿಶ್ರಣಗಳಲ್ಲದೇ ಇನ್ನೂ ಬೇರೆ ಬೇರೆ ರೀತಿಯ ಉತ್ತಮ ಸಾಮಾನುಗಳನ್ನೂ ಹಾಕಿ ತಯಾರಿಸಬಹುದು. ಉದಾಹರಣೆಗೆ, ಒಣ ಶುಂಠಿಗಳ ಚೂರು, ಜ್ಯೇಷ್ಠ ಮದ್ದು ಇತ್ಯಾದಿ.
ಕಷಾಯ ಚೊಲೊ ಇತ್ತು. ಜ್ಯೇಷ್ಟಮಧು ಜೊತೆಗೆ ಶು೦ಟಿಯನ್ನೂ ಸೇರಿಸಿ ಪುಡಿ ಮಾಡಿ ಕಶಾಯ ಮಾಡಿದರೆ ಮತ್ತೂ ಚೊಲೊ ಆಗ್ತು ತೇಜಸ್ವಿನಿ.ಹೊಸ ಬ್ಲಾಗಿಗೆ ಸುಸ್ವಾಗತ.
ReplyDeleteತೇಜಸ್ವಿನಿ,
ReplyDeleteತುಂಬ ಧನ್ಯವಾದಗಳು. ಕಷಾಯ ಚೆನ್ನಾಗಿದೆ.
kashaaya namma maneyalli nanage nitya shevane.daalchinni haakiralilla. adannu serisuttene munde.
ReplyDeletemadam,
ReplyDeletenannaakeyannu karedu odi heLiddene...
naaLeye try maaDuttene..
thank you..
mundina post ge kaayutteve...
tejakka, first student naane. attendance nalli hesru barkoLi. kashaya maaDkonDu kuDidu, nimgu pudi tandu torstini. correct maadi kodi adanna, homework thara :)
ReplyDeleteGood One Tejaswini :)
ReplyDeleteCheers,
Archana
ಕಷಾಯ ನನ್ನ ಇಷ್ಟದ ಪೇಯಗಳಲ್ಲೊಂದು. ನಮ್ಮ ಮನೆಯಲ್ಲಿ ಯಾವಾಗ್ಲೂ ಕಶಾಯ ಪುಡಿ ಇದ್ದೇ ಇರುತ್ತದೆ. ಇದು ಗಂಟಲಿಗೆ ಚೆನ್ನಾಗಿ ಆರಾಮ ಕೊಡುತ್ತದೆ.
ReplyDeleteಹೀಗೇ ಈ ಹೊಸ ಬ್ಲಾಗಲ್ಲಿ ಆರೋಗ್ಯಭಾಗ್ಯದ ವಿವಿಧ ಒಗ್ಗರಣೆಗಳು ಘಮಘಮಿಸಲಿ ಎಂದು ಆಶಿಸುತ್ತೇನೆ ;)
ಧನ್ಯವಾದಗಳು.
ತಂಗೀ...
ReplyDeleteಛಳಿ ಶುರುವಾಗುತ್ತಿದ್ದಂತೇ.. ನಿಮ್ಮ ಒಗ್ಗರಣೆ ಮನೆಯಲ್ಲಿ ಒಳ್ಳೆಯ ಘಮಘಮಿಸುವ ಕಷಾಯ ಹಾಕಿದ್ದೀರಿ. ಎಲ್ಲರಿಗೂ ಈಗ ಖಂಡಿತಾ ಅವಶ್ಯಕ, ತಂಪು ಹವೆ ಬೀಸುತ್ತಿರುವ ಹಿನ್ನೆಲೆಯಲ್ಲಿ, ನೆಗಡಿ, ಗಂಟಲು ಬೇನೆಗಳ ಕಾಟದಿಂದ ತಪ್ಪಿಸಿಕೊಳ್ಳಲು ಒಳ್ಳೆ ಉಪಾಯ. ಕಷಾಯ ನಾವೂ ಮಾಡುತ್ತೇವೆ.. ಚೆನ್ನಾಗಿದೆ ನಿಮ್ಮ ಪ್ರಯತ್ನ. ಶುಭವಾಗಲಿ. ಹೊಸ ಹೊಸ ವೈವಿಧ್ಯಮಯ ಅಡಿಗೆ ಮಾಡುವ ವಿವರಗಳಿಗೆ ಕಾಯುತ್ತಿದ್ದೇನೆ... :-)
ಶ್ಯಾಮಲ
naanu try maadi nodthene.... :)
ReplyDeletemundina hosa khaadyagaLige kaaytha ideeni teacher :P
ನಾನೊಂದು ಕಾಮೆಂಟ್ ಹಾಕಿದ್ದೆ ಅದಕ್ಕೆ ಒಗ್ಗರಣೆ ಹಾಕ್ತೀರಾ ಅಂದ್ಕೊಂಡೆ ಆದ್ರೆ ಅದನ್ನ ..ಈರುಳ್ಳಿ ಸಿಪ್ಪೆ ಜೊತೆ ಎಸ್ದಿದ್ದೀರಿ ಅಂತ ಗೊತ್ತಾಗ್ತಾ ಇದೆ..ತೇಜಸ್ವಿನಿ,,,ಹಹಹಹ್
ReplyDeleteನನ್ನ ಒಗ್ಗರಣೆಗೆ ನಿಮ್ಮ ಪ್ರತಿಕ್ರಿಯೆಗಳ ಮೂಲಕ ಮತ್ತಷ್ಟು ಪರಿಮಳ ತುಂಬಿದ ಎಲ್ಲರಿಗೂ ತುಂಬಾ ಧನ್ಯವಾದಗಳು. ನಿಮ್ಮೆಲ್ಲರ ಸಹಕಾರ/ಸಲಹೆಗಳು ನನಗೆ ಅತ್ಯಗತ್ಯ.
ReplyDeleteಆಝಾದ್ ಅವರೆ,
ನಿಮ್ಮ ಯಾವ ಪ್ರತಿಕ್ರಿಯೆಯೂ ಒಗ್ಗರಣೆಗಾಗಲೀ, ಮಾನಸಕ್ಕಾಗಲೀ ಸಿಕ್ಕಿಲ್ಲ! ಬಹುಶಃ ನೀವು ಒಗ್ಗರಣೆಯನ್ನು ಸರಿಯಾಗಿ ಸಿಡಿಸಲಿಲ್ಲವೋ ಏನೋ.. ನೋಡಿಕೊಳ್ಳಿ.... :)
ಧನ್ಯವಾದಗಳು.
Thanks for the bisi bisi kashaya tejakka ...
ReplyDeleteನನಗೆ ದೇಶ ಬಿಟ್ಟು ಬಂದ ಮೇಲೆ ಕೆಲವು ಊರಿನ ಹಳೆ ಹಳೆ recipes ಎಲ್ಲ ಮರೆತ್ಹೊಗ್ತಾ ಇತ್ತು ... ಅದೆಲ್ಲ ಇಲ್ಲಿ ಸಿಗ್ತು ಅನ್ಕತ್ತಿ :)
Waiting for more of nimmoora recipes:))
ReplyDelete:-) recently i too added a post on Kashaya!!
ReplyDeleteBut i love my 'garam garam chai'
Loved the appe midi chutney post.
will look out for updates
:-)
malathi S
ವಂದನೆಗಳು ತೇಜಸ್ವಿ ಅವ್ರೆ ತಮ್ಮಿಂದ ಬಹಳ ಉಪಯುಕ್ತ ಮಾಹಿತಿ ನಮಗೆ ದೊರೆತಿದೆ..ನಾನು ಬಾಲ್ಯದಲ್ಲಿ ಹಳ್ಳಿಯಲ್ಲಿ ಇದ್ದಾಗ ಕಷಾಯ ಕುಡಿದಿದ್ದು .ಈಗ ಮತ್ತೆ ನಮ್ಮ ಬೆಂಗಳೂರಿನ ಥಂಡಿ ಹವಾ ಕಷಯ ಕುಡಿಯುವಂತೆ ಪ್ರೆರಪಿಸಿತು ಇದಕ್ಕೆ ಅಂತರ್ಜಾಲ ತಡಕಾಡುವಾಗ ತಮ್ಮ ಈ ಮಾಹಿತಿ ದೊರಕಿದೆ ..ವಂದನೆಗಳು ..
ReplyDelete