ಈ
ಲಾಕ್ ಡೌನ್ ಬಹಳ ಪಾಠ ಕಲಿಸಿದೆ. ಅವುಗಳಲ್ಲಿ ನಮ್ಮ ಆಹಾರ ಕ್ರಮದಲ್ಲಿ ಬದಲಾವಣೆಮಾಡಿಕೊಳ್ಳುವುದೂ ಒಂದು. ಏರುತ್ತಿರುವ ಬೆಲೆ, ಆದಷ್ಟು ನಾವು ಹೊರಬೀಳದಂತೇ ನೋಡಿಕೊಳ್ಳಬೇಕಾಗಿರುವ ಜವಾಬ್ದಾರಿಯಿಂದಾಗಿ ತೆಂಗಿನಕಾಯಿ ಬಳಸದ, ಹೆಚ್ಚು ತರಕಾರಿ ಹಾಕದೇ ಮಾಡುವಂತಹ
ಅನೇಕ ಪದಾರ್ಥಗಳ ಅನ್ವೇಷಣೆಗೂ ದಾರಿಯಾಗಿದೆ! ಪ್ರಸ್ತುತ ನಾನಿಲ್ಲಿ ದೋಸೆ, ಚಪಾತಿ,
ಇಡ್ಲಿಗಲ್ಲದೇ, ಅನ್ನಕ್ಕೂ ಕಲಿಸಿ ತಿನ್ನಬಹುದಾದಂಥ ಬಲು ರುಚಿಕರ ಟೊಮೇಟೋ ಗೊಜ್ಜನ್ನು (ತೆಂಗಿನ
ಕಾಯಿ ಬಳಸದೇ ಮಾಡುವಂಥದ್ದು) ತಯಾರಿಸುವ ಎರಡು ರೀತಿಯ ವಿಧಾನವನ್ನು ವಿವರಿಸಿದ್ದೇನೆ.
ಮನೆಯ
ಸುತ್ತಮುತ್ತ ನುಗ್ಗೆಮರವಿದ್ದರೆ ಅದರ ಸೊಪ್ಪಿನಿಂದ, ಮನೆಯಂಗಳದಲ್ಲಿ ಗೋಳಿಸೊಪ್ಪು (ಗಿಡಬಸಳೆ)
ಬೆಳೆದಿದ್ದರೆ ಅದರಿಂದಲೋ ತೆಂಗಿನಕಾಯಿಯನ್ನು ಹಾಕದೇ ದಪ್ಪ ಸಾಂಬಾರನ್ನೂ ಮಾಡಬಹುದಾಗಿದೆ. ಅದರ
ರೆಸಿಪಿಯನ್ನು ಮತ್ತೊಮ್ಮೆ ಹೇಳುವೆ. ಸದ್ಯಕೆ ಈಗ ಟೊಮೇಟೋ ಹಣ್ಣಿನಿಂದ ತಯಾರಿಸುವ ಎರಡು ರೀತಿಯ
ಗೊಜ್ಜಿನ ವಿವರ ನೀಡುತ್ತಿದ್ದೇನೆ. ಮಾಡಿ ನೋಡಿರಿ.. ಸವಿದು ತಿಳಿಸಿರಿ. J
(ಸೂಚನೆ
: ನಾನಿಲ್ಲಿ ೮ ಜನರಿಗೆ ಬೇಕಾಗುವ ಪ್ರಮಾಣ ನೀಡಿರುವೆ)
ವಿಧಾನ
೧
ಬೇಕಾಗುವ
ಸಾಮಗ್ರಿಗಳು :-
೧.
ಟೋಮೇಟೋ ಹಣ್ಣು – ದೊಡ್ಡ ಗಾತ್ರದ್ದಾಗಿದ್ದರೆ ೪, ಚಿಕ್ಕದ್ದಾಗಿದ್ದರೆ ೬
೨.
ನೆಲಗಡಲೆ – ೩ ಚಮಚ
೩.
ಬಿಳೇ ಎಳ್ಳು – ೩ ಚಮಚ
೪.
ಕಡಲೆಬೇಳೆ – ೨ ಚಮಚ
೫.
ಕರಿಬೇವು – ೮ ರಿಂದ ೧೦ ಎಸಳು
೬.
ಇಂಗು – ರುಚಿಗೆ ತಕ್ಕಷ್ಟು
೭.
ಖಾರಕ್ಕೆ ತಕ್ಕಷ್ಟು – ಹಸಿಮೆಣಸು ಅಥವಾ ಕೆಂಪುಮೆಣಸು. (ಕೆಂಪು ಮೆಣಸು ಹೆಚ್ಚು ಒಳ್ಳೆಯದು)
೮.
ಉಪ್ಪು, ಹುಳಿ – ರುಚಿಗೆ ತಕ್ಕಷ್ಟು
೯.
ತೆಂಗಿನೆಣ್ಣೆ – ೪ ಚಮಚ (ನೀವು ಅಡುಗೆಗೆ ಬಳಸುವ ಯಾವುದೇ ಎಣ್ಣೆ ಆಗಬಹುದು. ತೆಂಗಿನೆಣ್ಣೆ
ಆರೋಗ್ಯಕ್ಕೆ ಉತ್ತಮ.)
೧೦. ಒಗ್ಗರಣೆಗೆ - ಸಾಸಿವೆ, ಕರಿಬೇವು, ಉದ್ದಿನಬೇಳೆ
ಮಾಡುವ
ವಿಧಾನ : -
*ಮೊದಲು
ಟೊಮೇಟೋವನ್ನು ಚಿಕ್ಕದಾಗಿ ಹೆಚ್ಚಿಟ್ಟುಕೊಳ್ಳಿ.
*ಬಾಣಲೆಗೆ
೨-೩ ಚಮಚ ಎಣ್ಣೆ ಹಾಕಿ ಅದು ತುಸು ಬಿಸಿಯಾಗಿದ್ದೇ ಅದಕ್ಕೆ ಎಳ್ಳು, ಉದ್ದಿನಬೇಳೆ, ಕಡಲೇಬೇಳೆ,
ಶೇಂಗಾ, ಕರಿಬೇವು, ಮೆಣಸು, ಇಂಗು ಎಲ್ಲಾ ಹಾಕಿ ಚೆನ್ನಾಗಿ ಹುರಿದುಕೊಳ್ಳಿ.
*ಇದಕ್ಕೆ
ಹೆಚ್ಚಿಟ್ಟುಕೊಂಡಿರುವ ಟೊಮೇಟೋವನ್ನು ಹಾಕಿ, ಉಪ್ಪು+ಹುಳಿಯ ಜೊತೆಗೆ ಚೆನ್ನಾಗಿ ಫ್ರೈ
ಮಾಡಿಕೊಳ್ಳಿ.
*ಈ
ಮಿಶ್ರಣ ತಣಿದ ನಂತರ ರುಬ್ಬಿಕೊಂಡು ಇದಕ್ಕೆ ಒಂದು ಅಥವಾ ಅರ್ಧ ಚಮಚ ಎಣ್ಣೆಯಲ್ಲಿ ಸಾಸಿವೆ, ಕಾಲು
ಚಮಚ ಉದ್ದಿನಬೇಳೆ, ಒಂದೆರಡು ಎಸಳು ಕರಿಬೇವಿನಿಂದ ಒಗ್ಗರಣೆ ಹಾಕಿ. (ಕರಿಬೇವು ಕಡಿಮೆ ಇದ್ದರೆ
ತುಸುವೇ ಬಳಸಬಹುದು. ಕಡಲೆ, ಉದ್ದಿನಬೇಳೆ, ಶೇಂಗಾ – ಇವೆಲ್ಲಾ ಹಾಕುವುದರಿಂದ ತೆಂಗಿನಕಾಯಿ ಕಾಕಬೇಕೆಂದಿಲ್ಲ.
ಬಹಳ ರುಚಿಯಾಗಿರುತ್ತದೆ. ಬೇಕಿದ್ದಲ್ಲಿ ಮರುದಿವಸವೂ ಫ್ರಿಜ್ಜಿಂದ ತೆಗೆದು ತುಸು ಬಿಸಿಮಾಡಿ
ಬಳಸಬಹುದು.)
ವಿಧಾನ
೨ : ಇದು ಮೊದಲಿನದ್ದಕ್ಕಿಂತ ಮತ್ತೂ ಸುಲಭ ಹಾಗೂ ಸರಳ.
ಬೇಕಾಗುವ
ಸಾಮಗ್ರಿಗಳು :
೧.
ಟೊಮೇಟೋ – ೪-೫
೨.
ತೆಂಗಿನೆಣ್ಣೆ – ೩-೪ ಚಮಚ
೩.
ಈರುಳ್ಳಿ – ಸಾಧಾರಣ ಗಾತ್ರದ್ದು ಒಂದು
೪.
ಹಸಿಮೆಣಸು/ಕೆಂಪುಮೆಣಸು – ಖಾರಕ್ಕೆ ತಕ್ಕಷ್ಟು
೫.
ಪುಟಾಣಿ ಬೇಳೆ – ಎರಡು ಮುಷ್ಟಿ
೬.
ಉಪ್ಪು, ಹುಳಿ ಮತ್ತು ಇಂಗು
೭.
ಒಗ್ಗರಣೆಗೆ : ಸಾಸಿವೆ, ಕರಿಬೇವು ಹಾಗೂ ಒಂದು ಒಣಮೆಸಿನ ಚೂರು
ಮಾಡುವ
ವಿಧಾನ
*ಬಾಣಲೆಗೆ
ಸ್ವಲ್ಪ ಎಣ್ಣೆ ಹಾಕಿ ಮೊದಲು ಹೆಚ್ಚಿಟ್ಟುಕೊಂಡಿರುವ ಟೊಮೇಟೊವನ್ನು ಚೆನ್ನಾಗಿ ಹುರಿದು
ತೆಗೆದಿಟ್ಟುಕೊಳ್ಳಿ. ಅದೇ ಬಾಣಲೆಗೆ (ಎಣ್ಣೆ ಇದ್ದಿರುತ್ತದೆ ಮೊದಲೇ ಹಾಕಿದ್ದು.. ಬೇಕಿದ್ದಲ್ಲಿ
ಮತ್ತೆ ಸ್ವಲ್ಪ ಹಾಕಿಕೊಳ್ಳಿ) ಹೆಚ್ಚಿಟ್ಟುಕೊಂಡಿರುವ ಈರುಳ್ಳಿಹಾಕಿ ಫ್ರೈ ಮಾಡಿ
ತೆಗೆದಿಟ್ಟುಕೊಳ್ಳಿ.
*ಅದೇ
ಬಾಣಲೆಯಲ್ಲಿ ಇರುವ ಎಣ್ಣೆ ಪಸೆಯಲ್ಲೇ ಮೆಣಸನ್ನು ಹುರಿದಿಟ್ಟುಕೊಳ್ಳಿ.
*ಈಗ
ಮೇಲೆ ಹೇಳಿರುವಂತೇ ಹುರಿದಿಟ್ಟುಕೊಂಡ ಎಲ್ಲಾ ಮಿಶ್ರಣಕ್ಕೆ (ತುಸು ತಣಿದ ನಂತರ) ಪುಟಾಣಿಬೇಳೆ,
ಉಪ್ಪು, ಹುಳಿ, ಚಿಟಿಕೆ ಇಂಗು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
*ಈ
ಮಿಶ್ರಣಕ್ಕೆ ಸಾಸಿವೆ, ಕರಿಬೇವು ಹಾಗೂ ಒಣಮೆಣಸಿನ ಚೂರುಹಾಕಿ ಒಗ್ಗರಿಸಿ.
ಇದನ್ನೂ
ಮಾಡಿನೋಡಿ.. ಸವಿದು ಹೇಳಿ.
ಬದುಕಿಗಾಗಿ
ತಿನ್ನುವತ್ತ ನಮ್ಮ ನೋಟ ಸಾಗಲಿ. ರುಚಿಕರ, ಆರೋಗ್ಯಕರ, ಸುಲಭ, ಸರಳ ಆಹಾರದ ಶೈಲಿಯಿಂದ
ಸ್ವಸ್ಥರಾಗುತ್ತಾ ಸಾಗೋಣ.
#ಆರೋಗ್ಯವೇ_ಭಾಗ್ಯ
~ತೇಜಸ್ವಿನಿ
ಹೆಗಡೆ