ಕೃಪೆ: ಅಂತರ್ಜಾಲ |
ಗೋವೆಕಾಯಿಗೆ
ಚೀನಿಕಾಯಿ, ಸಿಹಿಗುಂಬಳ ಕಾಯಿ ಎಂಬಿತ್ಯಾದಿ ಹೆಸರುಗಳಿವೆ. ಗೋವೆಕಾಯಿಯಲ್ಲಿ ವಿಟಮಿನ್ ಎ ಬಹಳ
ಹೆಚ್ಚಿರುತ್ತದೆ. ಅಲ್ಲದೇ, ಇದರೊಳಗಿರುವ ಪೊಟಾಶಿಯಮ್ ಮತ್ತು ಬೀಟಾ ಕೆರೋಟಿನ್ ಕಣ್ಣಿಗೆ,
ಹೃದಯಕ್ಕೆ,
ರಕ್ತದೊತ್ತಡಕ್ಕೆ, ಚರ್ಮದ ಹೊಳಪಿಗೆ ಹೀಗೆ ಗೋವೆಕಾಯಿ
ಬಹು
ಉಪಯೋಗಿಯಾಗಿದೆ.
ದೀಪಾವಳಿಯ
ದಿವಸ
ಬಹುತೇಕ
ಹವ್ಯಕರ
ಮನೆಗಳಲ್ಲಿ
ಇದರದ್ದೇ
ಕಡುಬನ್ನು
ಸಿಹಿ
ತಿಂಡಿಯಾಗಿ
ಮಾಡುತ್ತಾರೆ.
ಇದನ್ನು
ತಯಾರಿಸಲು
ಬೇಕಾಗುವ
ವಸ್ತುಗಳು
ಬಹಳ
ಕಡಿಮೆ.
ಆದರೆ
ಮಾಡುವ
ಹದ
ಚೆನ್ನಾಗಿ
ಗೊತ್ತಿರಬೇಕಾಗುತ್ತದೆ.
ಗೋವೆಕಾಯಿಯ
ಕಡುಬಿಗೆ
ಹಸುವಿನ
ತುಪ್ಪ
ಹಾಕಿ
ತಿಂದರೆ
ವಾಯು
ಸಮಸ್ಯೆ
ಆಗದು,
ಹೊಟ್ಟೆಗೂ
ತಂಪು,
ಜೀರ್ಣವಾಗುವುದು
ಸುಲಭವಾಗಿ.
ಅಲ್ಲದೇ
ಮೊಸರಿನ
ಜೊತೆಗೂ
ಸವಿಯಬಹುದು..
ಇದರ
ಮಜವೇ
ಬೇರೆ.
ಸಿಹಿ
ಪ್ರಿಯರು
ಇದಕ್ಕೆ
ಜೇನುತುಪ್ಪ,
ತುಪ್ಪ,
ಸಕ್ಕರೆ,
ಬೆಲ್ಲ
ಎಲ್ಲವನ್ನೂ
ಸುರಿದುಕೊಂಡು
ತಿನ್ನುವುದೂ
ಇದೆ.
ಈಗ
ಇದನ್ನು
ತಯಾರಿಸುವ
ವಿಧಾನವನ್ನು
ನೋಡೋಣ.
ನೀವೂ
ಈ
ಸಿಹಿಗಡುಬನ್ನು
ತಯಾರಿಸಿಕೊಂಡು
ಮೆದ್ದು
ಹೇಗಾಗುವುದು
ಎಂಬುದನ್ನೂ
ಪ್ರತಿಕ್ರಿಯೆಯಲ್ಲಿ
ತಿಳಿಸಿರಿ.
**********************
ಗೋವೆಕಾಯಿ ಕಡುಬು |
ಬೇಕಾಗುವ ಸಾಮಗ್ರಿಗಳು
(ಸಾಧಾರಣ ದೊಡ್ಡ ಗಾತ್ರದ ಐದು ಕಡುಬಿನ ಪ್ರಮಾಣಕ್ಕೆ)
·
ಅಕ್ಕಿ – ೧ ಲೋಟ
·
ಚೀನಿಕಾಯಿ ಅಥವಾ ಗೋವೆಕಾಯಿ ಹೋಳುಗಳು – ಎರಡೂವರೆ ಲೋಟ
·
ಬೆಲ್ಲ – ಊರಿನ ಹದಾ ಗಟ್ಟಿ ಬೆಲ್ಲವಾದರೆ ಒಂದೂಕಾಲು ಲೋಟ.
ಅಂಗಡಿಯ ಅಚ್ಚುಬೆಲ್ಲವಾದರೆ, ಅದನ್ನು ಕುಟ್ಟಿ ಪುಡಿಮಾಡಿಕೊಂಡು ಒಂದೂವರೆ ಲೋಟ ಹಾಕಬೇಕು.
·
ಕಾಯಿ ತುರಿ – ೧/೨ ಭಾಗ
·
ಏಲಕ್ಕಿ – ಪರಿಮಳಕ್ಕೆ ತಕ್ಕಂತೆ
·
ಬಾಳೆ ಎಲೆಗಳು – ಉದ್ದ ಗಾತ್ರ ಬಾಳೆಯೆಲೆ ೩ (ಒಂದು
ಬಾಳೆಯೆಲೆಯಲ್ಲಿ ಎರಡು ಕಡುಬನ್ನು ಹಚ್ಚಬಹುದು ಇಲ್ಲಾ ಅದನ್ನು ತುಂಡು ಮಾಡಿಕೊಂಡು ಬೇರೆಬೇರೆಯಾಗೂ
ಹಚ್ಚಬಹುದು.)
ಮಾಡುವ ವಿಧಾನ
೧. ಮೊದಲು ಅಕ್ಕಿಯನ್ನು ೪ ಗಂಟೆ
ನೆನೆಹಾಕಬೇಕು.
೨. ನೆನೆದ ಅಕ್ಕಿಯನ್ನು ಮಂದವಾಗಿ
ಅಂದರೆ ಜಾಸ್ತಿ ನೀರು ಹಾಕದೆ ಗಟ್ಟಿಯಾಗಿ ಮತ್ತು ನುಣ್ಣಗೆ ಕಡೆದಿಟ್ಟುಕೊಳ್ಳಬೇಕು. ಅಕ್ಕಿಯನ್ನು
ಕಡೆಯುವಾಗಲೇ ಏಲಕ್ಕಿಯನ್ನೂ ಅದಕ್ಕೇ ಹಾಕಿಬಿಡುವುದು.
೩. ಗೋವೆಕಾಯಿಯನ್ನು ಸಿಪ್ಪೆ ತೆಗೆದು
ಚಿಕ್ಕದಾಗಿ ಹೆಚ್ಚಿಟ್ಟುಕೊಳ್ಳುವುದು.
೪. ಬೆಲ್ಲವನು ದಪ್ಪ ತಳದ ಪಾತ್ರೆಗೆ
ಹಾಕಿ ಕುದಿಸುವುದು.
೫. ಬೆಲ್ಲ ಕುದಿ ಬರುತ್ತಿರುವಂತೇ,
ಅದಕ್ಕೆ ಹೆಚ್ಚಿಟ್ಟುಕೊಂಡಿರುವ ಗೋವೆಕಾಯಿಯ ಹೋಳು ಮತ್ತು ಅರ್ಧಗಡಿ ತೆಂಗಿನ ಕಾಯಿ ತುರಿಯನ್ನು
ಹಾಕಿ ಹತ್ತು ನಿಮಿಷ ಕುದಿಸುವುದು.
೬. ಈ ಮಿಶ್ರಣಕ್ಕೀಗ
ಬೀಸಿಟ್ಟುಕೊಂಡಿರುವ ಗಟ್ಟಿ ಅಕ್ಕಿ ಹಿಟ್ಟನ್ನು ಒಂದು ಕೈಯಿಂದ ಹಾಕುತ್ತಾ ಮತ್ತೊಂದು ಕೈಯಲ್ಲಿ
ತೊಳೆಸುತ್ತಲೇ ಇರಬೇಕು. ಪೂರ್ತಿ ಅಕ್ಕಿಹಿಟ್ಟನ್ನು ಹಾಕಿ ಕೊಂಡು ಆಮೇಲೆ ಅದನ್ನು ತೊಳೆಸಲು ಹೋದರೆ
ಅದು ಗಟ್ಟಿಯಾಗಿಬಿಡುವುದು. ಮೊದಮೊದಲು ಇದು ಕಷ್ಟವಾದರೆ, ಸಹಾಯಕ್ಕೊಬ್ಬರು ಬಳಿ ಇದ್ದರೆ, ಒಬ್ಬರು
ಹಿಟ್ಟನ್ನು ಸುರಿಯುತ್ತಾ ಹೋದರೆ ಮತ್ತೊಬ್ಬರು ಬಿಡದೇ ತೊಳೆಸುತ್ತಾ ಹೋಗುವುದು ಒಳ್ಳೆಯದು. ಹೀಗೆ
ತೊಳೆಸುತ್ತಾ ಹೋದಂತೆ ಮಿಶ್ರಣ ಮಣ್ಣಿಯ ಹದಕ್ಕೆ ಬಂದು ಮುದ್ದೆಯಾಗುವುದು. ಆಗ
ಒಲೆಯನ್ನಾರಿಸಿಬಿಡುವುದು.
೭. ಬಾಳೆ ಎಲೆಗಳನ್ನು ಒಲೆಯಲ್ಲಿ ತುಸು
ಬಾಡಿಸಿಟ್ಟುಕೊಳ್ಳುವುದು.
೮. ತುಸು ತಣಿದ ಮೇಲೆ ಮುದ್ದೆಯನ್ನು
ಕೈಯಲ್ಲಿ ತೆಗೆದುಕೊಂಡು ತುಸು ಬಾಡಿಸಿಟ್ಟುಕೊಂಡಿರುವ ಬಾಳೆ ಎಲೆಯ ಮೇಲೆ ಬೇಕಾದ ಆಕಾರಕ್ಕೆ
ಹಚ್ಚಿ, ಅದನ್ನು ನಾಲ್ಕೂ ಬದಿಯಿಂದ ಮಡಚುವುದು.
೯. ಇದನ್ನು ಇಡ್ಳಿ ದಳ್ಳೆಯಲ್ಲಿಟ್ಟು
ಬೇಯಿಸುವುದು. ಇದು ಬೇಯಲು ಸುಮಾರು ಒಂದು ತಾಸು ಬೇಕಾಗುವುದು.
೧೦. ಹದವಾಗಿ ಬೆಂದ ಬೆಲ್ಲದ ಗೋವೆಕಾಯಿ
ಸಿಹಿಗಡುಬನ್ನು ತುಪ್ಪದ ಜೊತೆಗೆ ಅಥವಾ ಮೊಸರಿನ ಜೊತೆಗೆ ಮೆಲ್ಲಬಹುದು. ಕೆಲವರು ಇದಕ್ಕೆ
ಜೇನುತುಪ್ಪ, ಬೆಲ್ಲ, ತುಪ್ಪ ಎಲ್ಲವನ್ನೂ ಹಾಕಿಕೊಂಡು ತಿನ್ನುವುದೂ ಇದೆ.
ರೆಸಿಪಿ ಕೃಪೆ : ನನ್ನ ಅಮ್ಮ ಶ್ರೀಮತಿ ಜಯಲಕ್ಷ್ಮೀ ಭಟ್
~ತೇಜಸ್ವಿನಿ ಹೆಗಡೆ
No comments:
Post a Comment