Courtesy : Internet |
ಬಟಾಟೆ ಖಾರಾ ತಾಳಿಗೆ ಬೇಕಾಗುವ ಸಾಮಾಗ್ರಿಗಳು :
೨ ಮಧ್ಯಮ ಗಾತ್ರದ ಬಟಾಟೆ
ರವೆ - ೨ ದೊಡ್ಡ ಚಮಚ.
ಮೆಣಸಿನ ಹುಡಿ - ಖಾರಕ್ಕೆ ತಕ್ಕ
ಉಪ್ಪು - ರುಚಿಗೆ ತಕ್ಕ
ತೆಂಗಿನೆಣ್ಣೆ
ಮಾಡುವ ವಿಧಾನ
೧. ಮೊದಲು ಬಟಾಟೆಯನ್ನು ತೊಳೆದು, ಸಿಪ್ಪೆ ತೆಗೆದು ಆದಷ್ಟು ತೆಳುವಾಗಿ ತಾಳಿ ಮಾಡಿಟ್ಟುಕೊಳ್ಳಿ.
೨. ಒಂದು ಬಟ್ಟಲಿಗೆ ರವೆ, ಉಪ್ಪು, ಖಾರ ಹಾಕಿ ಮಿಶ್ರಣ ಮಾಡಿ (ನೀರು ಹಾಕದೇ...) ಹುಡಿ ಮಿಶ್ರಣದ ಉಪ್ಪು, ಖಾರ ಸರಿಯಾಗಿದೆಯೇ ಎಂದು ನೋಡಿಕೊಳ್ಳಿ.
೩. ಮಾಡಿಟ್ಟ ಬಟಾಟೆ ತಾಳಿಗಳನ್ನು ಹುಡಿಯ ಮಿಶ್ರಣಕ್ಕೆ ಹುದುಗಿಸಿ, ತಾಳಿಯ ಎರೆಡೂ ಬದಿ ಹುಡಿ ಅಂಟಿಕೊಳ್ಳುವಂತೆ ಮಾಡಿ.
೪. ದೋಸೆ ಕಾವಲಿ ಇಟ್ಟು, ಹುಡಿ ಅಂಟಿದ ಬಟಾಟೆ ತಾಳಿಗಳನ್ನು ಬಿಸಿಯಾದ ಬಂಡಿಯ ಮೇಲಿಟ್ಟು ಎರಡೂ ಬದಿ ಎರಡೆರಡು ಹನಿ ಎಣ್ಣೆ ಬಿಟ್ಟು, ಹಾಗೇ ಮುಚ್ಚಿ ಬೇಯಿಸಿ.
ಬಿಸಿ ಬಿಸಿ ಖಾರ ತಾಳಿಯನ್ನು ಮೊಸರಿನೊಂದಿಗೆ ಸವಿಯುವ ಮಜ, ತಿಂದವರಿಗೆ ಮಾತ್ರ ಗೊತ್ತು. ಉಪ್ಪು, ಖಾರದ ಜೊತೆ ರವೆಯ ರುಚಿಯ ಸ್ವಾದವೇ ಬೇರೆ. ಬೆಂದ ನಂತರ ಖಾರಾ ತಾಳಿಗಳ ಘಮ್ಮನೆ ಕಂಪು ಹಸಿವಿಲ್ಲದವರ ಹಸಿವನ್ನೂ ಬಡಿದೆಬ್ಬಿಸಿದ್ದರೆ ಹೇಳಿ.
ಮಾಡಿ ನೋಡಿ... ನೋಡಿ ಹೇಳಿ :)
-ತೇಜಸ್ವಿನಿ.
yaava rave hakavu anta gottajille,,, chiroti ravena?
ReplyDeleteಮೈತ್ರಿ - ಯಾವ ರವೆ ಆದ್ರೂ ಆಗ್ತು.... :) ಸಣ್ಣ ರವೆ ಆದ್ರೆ ಬೇಗ ಬೇಯ್ತು ಸ್ವಲ್ಪ ಅಷ್ಟೇ.
ReplyDeleteYummy appetizer..I usually prepare Kosugadde Podi this way..will try it with Potato sometime!
ReplyDeleteCheers!
Vani
ಚೆನ್ನಾಗಿರ್ತು..ಒಳ್ಳೆಯ ರೆಸಿಪಿ..
ReplyDelete