Thursday, February 03, 2011

ಬಾಯಲ್ಲಿ ನೀರೂರಿಸುವ ಬಟಾಣಿ ಸಾರು

http://guide2herbalremedies.com

ಬಟಾಣಿ ಸಾರನ್ನು ಬಹು ಸುಲಭವಾಗಿ, ಹೆಚ್ಚು ಸಾಮಗ್ರಿಗಳನ್ನು ಬಳಸದೇ ತಯಾರಿಸಬಹುದು. ಬಿಸಿ ಬಿಸಿ ಅನ್ನಕ್ಕೆ ಕಲಸಿ ತಿನ್ನಲು ಈ ಸಾರು ತುಂಬಾ ಚೆನ್ನಾಗಿರುತ್ತದೆ. ಬೆಳ್ಳುಳ್ಳಿ, ಈರುಳ್ಳಿ, ಇಂಗುಗಳನ್ನು ಬಳಸುವುದರಿಂದ ವಾಯುಪ್ರಯೋಕದ ಭಯವೂ ಇರದು. ಬಟಾಣಿ ಕಾಳನ್ನು ಸಮೋಸ, ಫಲಾವ್, ಘೀ ರೈಸ್‌ಗಳ ತಯಾರಿಕೆಯಲ್ಲೂ ಸಾಮಾನ್ಯವಾಗಿ ಬಳಸುತ್ತಾರೆ. ಬಟಾಣಿ ಕಾಳಿನ ಪಕೋಡ ಕೂಡ ತುಂಬಾ ಚೆನ್ನಾಗಿರುತ್ತದೆ.

ಆರೋಗ್ಯಕರ ಹಾಗೂ ಬಹೋಪಯೋಗಿ ಬಟಾಣಿ

೧. ಸಂಶೋಧನೆಗಳ ಪ್ರಕಾರ ಬಟಾಣಿ ಕಾಳು ವಿಟಮಿನ್‌ಗಳ "ಪವರ್ ಹೌಸ್". ಇದರಲ್ಲಿ ವಿಟಮಿನ್ ಎ, ಬಿ ಹಾಗೂ ಸಿಗಳು ಹೇರಳವಾಗಿದೆ. 
೨. ಇದರ ಸೇವನೆ ಮೂಳೆಗಳ ಬಲ ವೃದ್ಧಿಗೆ, ರಕ್ತ ಪರಿಚಲನೆಗೆ, ರಕ್ತ ಹೆಪ್ಪುಗಟ್ಟುವಿಕೆಗೂ ತುಂಬಾ ಉಪಯುಕ್ತ. ಹೇರಳ ಪ್ರೋಟೀನ್ ಹೊಂದಿರುವ ಬಟಾಣಿ "ಒಸ್ಟಿಯೋಪೋರೋಸಿಸ್"(ಮೂಳೆ ತೆಳ್ಳಗಾಗುವಿಕೆ, ಮೂಳೆ ಕರಗುವಿಕೆ) ರೋಗನಿವಾರಣೆಗೆ ಅತ್ಯಗತ್ಯವಾದ ವಿಟಮಿನ್ ಕೆ ಅನ್ನೂ ಹೊಂದಿದೆ.
೩. ಇವುಗಳಲ್ಲಿ ನಾರಿನಂಶ ಹೆಚ್ಚಾಗಿದ್ದು, ಕೊಬ್ಬಿನಂಶ ತೀರಾ ಕಡಿಮೆ ಹಾಗು ಕೊಲೆಸ್ಟ್ರಾಲ್ ಇಲ್ಲವೇ ಇಲ್ಲ.


ಸಾರಿನ ತಯಾರಿಕೆಗೆ ಬೇಕಾಗುವ ಸಾಮಗ್ರಿಗಳು

ನೆನೆಸಿದ ಬಟಾಣಿ ಕಾಳು - ೧ ಲೋಟ (ತೀರಾ ದೊಡ್ಡದೂ ಅಲ್ಲ, ಅತಿ ಚಿಕ್ಕದೂ ಅಲ್ಲ)
[Note : ಹಸಿ ಬಟಾಣಿಯಾಗಿದ್ದಲ್ಲಿ ಹಾಗೇ ಬೇಯಿಸುವುದು.. ನೆನೆಸಬೇಕೆಂದಿಲ್ಲ.]
ಟೊಮೆಟೋ - ೧
ಕೊತ್ತುಂಬರಿ ಬೀಜ - ೧-೨ ಚಮಚ (ಚಿಕ್ಕ ಚಮಚ)
ಕಾಯಿ ತುರಿ - ೧ ಬಟ್ಟಲು (ಬೌಲ್)
ಅರಿಶಿನ - ಚಿಟಿಕೆ
ಬೆಳ್ಳುಳ್ಳಿ - ೨-೩ ಎಸಳು
ಈರುಳ್ಳಿ - ೧ (ಮಧ್ಯಮ ಗಾತ್ರದ್ದು)
ಇಂಗು - ಚಿಟಿಕೆ (**ಬೆಳ್ಳುಳ್ಳಿ ಹಾಕುವುದರಿಂದ ಇಂಗು ಹಾಕಲೇ ಬೇಕೆಂದಿಲ್ಲ. ಆದರೆ ಇಂಗು ಬಟಾಣಿ ಕಾಳಿನೊಳಗಿನ ವಾಯುವಿನ ಪ್ರಭಾವವನ್ನು ತಗ್ಗಿಸುವುದರಿಂದ ಬಳಸಿದರೆ ಉತ್ತಮ.)
ಕೆಂಪು ಮೆಣಸು - ೨-೩ (ಖಾರಕ್ಕೆ ತಕ್ಕಂತೆ)
ಹುಳಿ - ಗೋಲಿಯಾಕಾರದಷ್ಟು
ಉಪ್ಪು ಹಾಗೂ ಬೆಲ್ಲ - ರುಚಿಕೆ ತಕ್ಕಷ್ಟು
ಮೆಂತೆ - ೩-೪ ಕಾಳು (**ಹೆಚ್ಚು ಹಾಕಬಾರದು... ಮೆಂತೆ ಹಾಕುವುದರಿಂದ ಸಾರು ತುಸು ದಪ್ಪಗಾಗಿ ತಿನ್ನಲು ಚೆನ್ನಗಾಗುತ್ತದೆ. ಹಾಗಾಗಿ ಕೇವಲ ಕೆಲವು ಕಾಳುಗಳನ್ನಷ್ಟೇ ಹಾಕಬೇಕು. ತುಂಬಾ ಹಾಕಿದರೆ ಕಹಿ ಆಗುವುದು!)

ಮಾಡುವ ವಿಧಾನ

* ಮೊದಲು ಚೆನ್ನಾಗಿ ನೆನೆದ ಬಟಾಣಿ ಕಾಳುಗಳ ಜೊತೆ ಒಂದು ಟೊಮೆಟೊ ಹೆಚ್ಚಿಹಾಕಿ, ಕುಕ್ಕರಿನಲ್ಲಿಟ್ಟು ಒಂದು ವಿಸಿಲ್ ಹಾಕಿ ಬೇಯಿಸಿಟ್ಟುಕೊಳ್ಳಬೇಕು.
* ಈರುಳ್ಳಿಯನ್ನು ಎರಡು ಭಾಗ ಮಾಡಿ, ಅದರಲ್ಲಿ ಒಂದು ಭಾಗವನ್ನು ಮಾತ್ರ ಹಾಗೇ ಸಾರಿನೊಂದಿಗೆ ಬೆರೆಸಿ ಕುದಿಸುವಂತೆ ಹೆಚ್ಚಿಕೊಳ್ಳಿ. ಇನ್ನೊಂದು ಭಾಗವನ್ನು ರುಬ್ಬಲು ಬಳಸಬೇಕು. (ಅರ್ಧ ಭಾಗವನ್ನು ಸಾರಿನೊಂದಿಗೆ ಕುದಿಸುವ ಬದಲು ಹಾಗೇ ಪೂರ್ತಿ ಈರುಳ್ಳಿಯನ್ನು ರುಬ್ಬಿಯೂ ಹಾಕಬಹುದು)
* ಕಾಯಿತುರಿಗೆ ಕೆಂಪು ಮೆಣಸು, ಮೆಂತೆ, ಕೊತ್ತೊಂಬರಿ ಬೀಜ, ಅರ್ಧ ಭಾಗ ಈರುಳ್ಳಿ, ಬೆಳ್ಳುಳ್ಳಿ,  ಅರಿಶಿನ - ಇವಿಷ್ಟನ್ನೂ ಹಾಕಿ ನುಣ್ಣಗೆ ಬೀಸಿಕೊಳ್ಳಬೇಕು
* ಬೆಂದ ಟೊಮೆಟೋ ಹಾಗೂ ಕಾಳುಗಳಿಗೆ ಬೀಸಿದ ಮಸಾಲೆಯನ್ನು ಹಾಕಿ ಬೇಕಾದ ಪ್ರಮಾಣದಲ್ಲಿ ನೀರನ್ನು ಹಾಕಬೇಕು. ಇದಕ್ಕೆ ಹೆಚ್ಚಿಟ್ಟುಕೊಂಡಿರುವ ಉಳಿದರ್ಧ ಈರುಳ್ಳಿ, ಉಪ್ಪು, ಬೆಲ್ಲ, ಹುಳಿಯನ್ನು ಹಾಕಿ ಚೆನ್ನಾಗಿ ಕುದಿಸಿ.
* ಕುದಿದ ಮೇಲೆ ಸಾಸಿವೆ ಒಗ್ಗರಣೆ ಬೇಕಿದ್ದರೆ ಹಾಕಬಹುದು.
* ಬಿಸಿ ಬಿಸಿ ಅನ್ನದೊಂದಿಗೆ ಈ ಸಾರು ಸೂಪರ್ಬ್! ವ್ಹಾ ಎಂದು ಚಪ್ಪರಿಸದಿದ್ದರೆ ಹೇಳಿ :)
(ಬೇಕಿದ್ದರೆ ಸ್ವಲ್ಪ ಕೊತ್ತುಂಬರಿ ಸೊಪ್ಪನ್ನೂ ಕೊನೆಯಲ್ಲಿ ಹಾಕಬಹುದು.)

-ತೇಜಸ್ವಿನಿ ಹೆಗಡೆ


8 comments:

  1. han tejakka ruchi agthu... avath madididyale... nanga bandaga... adeya hada????? :P

    ReplyDelete
  2. ತೇಜಕ್ಕ,

    ನಿಜಕ್ಕೂ ಬಾಯಲ್ಲಿ ನೀರು ಬರ ಹಂಗೆ ಬರದ್ದೆ...:-)

    ಆದರೆ ಬಟಾಣಿಯಲ್ಲಿ ಎರಡು ವಿಧ ಇರ್ತು ಅಲ್ದಾ? ಒಂದು ಒಣ ಬಟಾಣಿ,ಮತ್ತೊಂದು ಹಸಿ ಬಟಾಣಿ.
    ಒಣ ಆಗಿದ್ರೆ ನೆನೆ ಇಟ್ಕಳಕಾಗ್ತು.
    ಹಸಿದಾಗಿದ್ರೆ ಡೈರೆಕ್ಟ್ ಬೇಯಿಸಬಹುದು.
    (ಕೊಟ್ಟ ಚಿತ್ರಕ್ಕೂ, ಮಾಡುವ ವಿಧಾನಕ್ಕೂ ಚೂರು ವ್ಯತ್ಯಾಸ ಇದೆ.ಅದ್ಕೆ ಹೇಳ್ದಿ) hope you dont mind :-).

    ReplyDelete
  3. ದಿವ್ಯಾ,

    ಹೌದು.. ಹಸಿಯಾದರೆ ಹಾಗೇ ಮಾಡಬೇಕು.. ಒಣಗಿದ್ದರೆ ನೆನಸಬೇಕು. ಇದು ಗೊತ್ತಿರಬೇಕಾದ್ದ ಅಂಶ ಅಲ್ವೇ? :)

    (ಇದ್ಕೆಲ್ಲಾ ಎಂತಕ್ಕೆ ಬೇಜಾರು. ಇದನ್ನೂ ಸೇರ್ಸಿದ್ದಿ ಪೋಸ್ಟಿಗೆ ಈಗ... ಥ್ಯಾಂಕ್ಸ್:))

    ReplyDelete
  4. cholo agtu.. nanu guess madida hange eddu maduva vidhana kooda.. but nanu tomato nu haaki rubbavana anakandiddi..

    ReplyDelete
  5. kottumbri, mente , mensu huryudu bedadaa,,,,,

    ReplyDelete
  6. ಲಕ್ಷ್ಮೀ ಅವರೆ,

    ಒಗ್ಗರಣೆಗೆ ಸ್ವಾಗತ.

    ಇಲ್ಲ ಯಾವುದನ್ನೂ ಹುರಿಯ ಬೇಕಾಗಿಲ್ಲ.. ಗಮನಿಸಿ.. ಮೆಂತೆಯನ್ನು ಜಾಸ್ತಿ ಹಾಕಬಾರದು. ಹುರಿಯದಿರುವ ಕಾರಣ ಜಾಸ್ತಿಯಾದಲ್ಲಿ ಕಹಿ ಆಗುವ ಸಂಭವವಿರುತ್ತದೆ. ಮೆಂತೆ ೨-೩ ಕಾಳು ಸಾಕಾಗುತ್ತದೆ.

    ReplyDelete
  7. To be frank , ಬ್ಲಾಗ್ ಗೆ ಬ೦ದ ತಕ್ಷಣ ಇಲ್ಲೂ ಅಡುಗೆ ಮನೆಗೆ ಹೋಗುವುದು ಬೇಡ ಎ೦ದುಕೊ೦ಡೆ. ಆದರೆ ನೀವು ತಿಳಿಸಿರುವ ಆರೋಗ್ಯ ಸ೦ಬಧೀ ವಿಷಯಗಳು ಬಹಳ ಚೆನ್ನಾಗಿವೆ. ಬಟಾಣಿ ಸಾರು ಬಾಯಲ್ಲಿ ನೀರೂರಿಸಿತು. ಅಭಿನ೦ದನೆಗಳು.

    ReplyDelete